ಇಷ್ಟು ದಿನ ಕರ್ನಾಟಕವನ್ನು ರಾಗಿ ಮುದ್ದೆ ಮಾತ್ರ ಪ್ರತಿನಿಧಿಸುತ್ತಿತ್ತು. ಈಗ ಆ ಸಾಲಿಗೆ ಅಪ್ಪಟ ಕನ್ನಡ ಮಣ್ಣಿನ ರಾಗಿ ದೋಸೆ ಸಹ ಸೇರಿದೆ. ಈಗಾಗಲೇ ವಿದ್ಯಾರ್ಥಿ ಭವನ್ ಮಸಾಲೆ ದೋಸೆ, ಕೃಷ್ಣ ಭವನ್ ಬೆಣ್ಣೆ ಮಸಾಲೆ, ಜನಾರ್ದನ ಈರುಳ್ಳಿ ದೋಸೆ, ದ್ವಾರಕಾ ಹೋಟೆಲ್ ಖಾಲಿ ದೋಸೆ, ರಾಮಕೃಷ್ಣ ರಾಗಿ ದೋಸೆ, ಶಾಂತಿ ಸಾಗರ್ ಸೆಟ್ ದೋಸೆ....ಈ ಎಲ್ಲಾ ದೋಸೆಗಳನ್ನು ಸವಿದರೂ ರಾಗಿ ದೋಸೆ ಮಾತ್ರ ಸದಾ ಕಾಡುತ್ತಿರುತ್ತದೆ. ...