ಗೋಕರ್ಣ ದೇವಸ್ಥಾನದ ಒಡೆತನದ ಪ್ರಶ್ನೆ ಕರ್ನಾಟಕದಲ್ಲಿ ಸಾಕಷ್ಟು ಧೂಳೆಬ್ಬಿಸಿದೆ. ಯಾರು ಸರಿ, ಯಾರದು ತಪ್ಪು ಎನ್ನುವುದನ್ನು ಸರಿಯಾದ ಸಮಯಕ್ಕೆ ಆ ಮಹಾಬಲೇಶ್ವರನೇ ನಿರ್ಧರಿಸುತ್ತಾನೆ. ಈ ಮಧ್ಯೆ, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮಿಗಳ ನಡೆ ನುಡಿ ಕುರಿತು ಪರ ಹಾಗೂ ವಿರೋಧದ ಗಾಳಿ ಕರಾವಳಿ ತೀರದುದ್ದಕ್ಕೂ ಬೀಸತೊಡಗಿದೆ. ...